Monday, February 8, 2010

ಹುಣ್ಣಿಮೆ ಚಂದಿರನೊಂದಿಗೆ ಒಂದು ರಾತ್ರಿ



ಹುಣ್ಣಿಮೆ ಚಂದಿರನೊಂದಿಗೆ ಒಂದು ರಾತ್ರಿ

ತುಂಬಿದ ಚಂದ್ರನ ನೋಡಿದೆಯಾ ಚೆಲುವೆ ಇಂದು

ಹೊಳೆಯುತಿಹನು ನಿನ್ನ ಕಣ್ಣುಗಳಂತೆ,

ನಸು ನಗುತಿಹನು ನೀ ನನ್ನ ಮುಂದೆ ನಕ್ಕಂತೆ,

ನಾ ಹೇಗೆ ಬಣ್ಣಿಸಲಿ ಅವನನ್ನು ನೀ ಕಾಣುತಿರುವೆ ಅಲ್ಲಿ.




ಕೇಳ ಹೊರಟೆ ಅವನ ಹತ್ತಿರ ನಿನಗೆನನಿಸಿದೆ ಎಂದು

ಅದಕೆ ಅವನಂದ ತುಂಟು ನಗೆಯಲಿ,

ನಿಲ್ಲು ಸ್ವಲ್ಪ ನನ್ನ ಪ್ರಿಯತಮೆ ತಾರೆಗಳನು ಬೆಳಗಿ ಬರುವೆನು

ನಲಿಯಲಿ ಅವು ಉಲ್ಲಾಸದಲಿ ನನ್ನ ಈ ಸುಂದರ ಬೆಳಕಿನಲಿ.




ಬಿಸಿಲಲಿ ಬಳಲಿದವರಿಗೆ ತಂಗಾಳಿ ಜೊತೆ ಮಿಲನವಾಗಿರುವೆ ವಿಹರಿಸಲು

ಸಂತೈಸುವೆ ನೊಂದ ಮನಗಳಿಗೆ ತುಸು ಹೊತ್ತು ನೋವ ಮರೆಯಲು

ತಾಯಂದಿರ ಕೈ ತುತ್ತಾಗಿರುವೆ ಅಳುವ ಕಂದಮ್ಮಗಳಿಗೆ ಉಣಬಡಿಸಲು,

ಸ್ಪೂರ್ತಿಯಾಗಿರುವೆ ಪ್ರೇಮಿಗಳಿಗೆ ಹೃದಯ ಕದಿಯಲು

ಕನಸಾಗಿಹೆನು ಬೆಳದಿಂಗಳ ಊಟಕೆ ಹಾತೊರೆಯುತಿರುವೆ ಎಷ್ಟೋ ಪ್ರೇಮ ಪಕ್ಷಿಗಳಿಗೆ





ಇಂತಿಪ್ಪ ಚಂದಮಾಮ ತನ್ನ ವರ್ಣಿಸಿಕೊಳುತಿರಲು

ಮಾಯವಾದವು ತಾರೆಗಳು, ಮಂಜಿನ ಹನಿ ಗರಿಕೆಗೆ ಮುತ್ತಿಟ್ತಿರಲು

ಶುರುವಾಗಿತ್ತು ಹಕ್ಕಿ-ಪಕ್ಷಿಗಳ ನಾದ

ಅತ್ತ ಕೇಳಿಸಿತೊಂದು ಧ್ವನಿ " ಎಲವೋ ಚಂದಿರನೆ ನಿಲ್ಲಿಸು ನಿನ್ನ

ವರ್ಣಿಸು ಈಗ ನನ್ನ" ಎಂದಿತು ಮೂಡಣದಲಿ

ಉದಯಿಸುತಿತ್ತ ರವಿಮಾಮನ ರೂಪದಲಿ.

-ಚಂದ್ರು-