Thursday, December 15, 2011

ಆಸೆ!

ಆಸೆ

ಬಾಡಿ ಹೋಗದ ಹೂವ ನೀಡುವಾಸೆ
ಆರದಂತ ದೀಪ ಹಚ್ಚುವಂತ ಆಸೆ
ನೀ ಕೇಳರಿಯದ ಸಿಹಿ ತಿನಿಸುವಾಸೆ
ಚಿಟ್ಟೆಗಳ ಚಿತ್ರವನ ಕಟ್ಟಿ ನಿನ್ನ ಚಿಟ್ಟೆಯಂತೆ ಹಿಡಿಯುವಾಸೆ
ಚಂದಿರನ ಬೆಳಕ ಹಿಡಿದಿಟ್ಟು ದಿನವೂ ನಿನ್ನ ಮಲಗಿಸುವಾಸೆ
ಇದೆಂತ ನನ್ನವಳಾಸೆ ನಾ ಕೇಳರಿಯದ ವಸ್ತುವ ಕೇಳುತಿರುವಳಲ್ಲ ಉಡುಗೊರೆಯಾಗಿ!!.
-Chandseu-

Thursday, November 24, 2011

ಬಿಸಿಲು ಬೆಳದಿಂಗಳು

-ಬಿಸಿಲು ಬೆಳದಿಂಗಳು-

ಬದುಕ ಅರಿಯಬೇಕು ನೋವು ನಲಿವುಗಳಿಂದ,
ಚಂದ್ರನ ಬೆಳಕಂತೆ ಸಿಹಿ ಘಟನೆಗಳು,
ಅಮವ್ಯಾಸೆಯ ಕತ್ತಲಂತೆ ಕಹಿ ಘಟನೆಗಳು,
ಎರಡು ಬೇಕು ಬಾಳಲಿ ಸೂರ್ಯ ಚಂದ್ರರಂತೆ,
ಪರಿಪಕ್ವವಾಗಲು ಮಾನವ ಜನ್ಮಕೆ..

Tuesday, October 4, 2011

ಮದುವೆಯೊಂದು ಸಮಾರೋಪ!




ಮದುವೆಯೊಂದು ಸಮಾರೋಪ!

ಹೌದು ಇದು ಸಮಾರೋಪ ಯಾರಿಗಿಲ್ಲ ಈ ಶಾಪ,
ಕಾಯುವರಿಲ್ಲಿ ಇದಕೆ ಪಾಪ ಹಚ್ಹಲೆಂದು ಪ್ರೇಮದ ಲೇಪ,
ವಿರಹ ಗೀತೆಗಲ್ಲಿ ತಾಪ,
ಆಗಾಗ ಮುನಿಸಿಕೊಳ್ಳುವ ಕೋಪ,
ಏನಾದರಾಗಲಿ ಆಗಲಿ ಒಂದು ಪಾಪ!!

Thursday, September 29, 2011

ಕಂಬಾರರ ಕನ್ನಡಕೊಂದು..............


ಕಂಬಾರರ ಕನ್ನಡಕೊಂದು...


ಬನ್ನಿ ಕನ್ನಡಿಗರೇ ಇಂದು ಮತ್ತೊಂದು ಗರಿ ನಮ್ಮಿಹಿರಿಮೆಗೆ
ಅರಿಯಬನ್ನಿ ಕನ್ನಡದ ತಿರುಳು ಎಷ್ಟು ಮಹತ್ವವೆಂದು,
ಮಾತಾಡಿ ಕನ್ನಡದಲಿ ತಿಳಿಯುವುದಿಲ್ಲಿ ಭಾಷೆ ಸೊಗಸು,
ಕೂಗಿ ಹೇಳಿ ನಾ ಕನ್ನಡಿಗನೆಂದು ಹೆಮ್ಮೆಯಲಿ

ನಿತ್ಯ ಹಾಡಿ ಕನ್ನಡ ಕವಿ ಕುವರರ ಮಾನವತೆಯ ಸಂದೇಶಗಳನು
ಕಣ್ಣ ಹರಿಬಿಡಿ ಒಮ್ಮೆ ಕನ್ನಡ ಸಾಹಿತ್ಯದ ವನ ಕುಸುಮಗಳಲಿ,
ಅಷ್ಟ ದಿಗ್ಗಜರ ಸಾಧನೆಗಳ ಆ ಕೈಪಿಡಿಗಳಲಿ
ನೆನಪಿರಲಿ ಈ ಎಂಟರ ಗಂಟು ನಮ್ಮ ಕನ್ನಡಿಗರಿಗೆ ಮಾತ್ರ,
ಬಾರಿಸುತಲಿದೆ ಕುವೆಂಪು ಹೇಳಿದ ಆ ಕನ್ನಡ ಡಿಂಡಿಮವ.
--------------Chandru------------------

Wednesday, September 7, 2011

ವೊರ್ಕ v/s ವೋಡ್ಕಾ

ವೊರ್ಕ v/s ವೋಡ್ಕಾ

ಹೊರ ವರ್ತುಲ ರಸ್ತೆಗಳಿಗೆ ಒರ್ಕಾ,
ಎಂಪ್ಲಾಯೆಗಳು ಹೇಳುವರು ಕಂಪನಿಗೆ ಏನಾದ್ರು ಮಾಡ್ಕಾ
ಗಡಿಬಿಡಿಲಿ 5 ಗಂಟೆಗೆ ಓಡೋಕ,
ಆಫೀಸಲ್ಲಿ ಉಳಿದವರೆಲ್ಲೇ ಆಗಿರುವರು ಬಕ್ರ,

ಟೀಮ್ ಲೀಡ್ಗಳು ಆಫೀಸ್ ಕಾಲಿ ಕಾಲಿ ನೋಡಾಕ,
ಮ್ಯಾನೆಜರಗಳೆಲ್ಲ ಬಾಯಿ ಬಾಯಿ ಬಡ್ಕೊಳಕಾ,
ಅತ್ತ ಆನ್ ಸೈಟ ಜನ ನಮ್ಮ ಜನನ್ನ ಬೈದ್ಕೊಳಕಾ
ಹೆಚ್ ಆರ್ ಹಾಜರಿಗೆ ತಲೆ ಕೆರ್ಕೊಳಕಾ,
ಹಳೆ ಟ್ರಾವೆಲ್ ಏಜೆಂಟ್ ಶಾಪ ಹಾಕೋಕ,
ಇತ್ತ ಎಂಪ್ಲಾಯೆಗಳು ಮನೆಗೆ ಹೋಗಿ ಲೈಟಾಗಿ ತಗೋತ ಇದ್ರೂ ವೋಡ್ಕಾ!!

-Chandseu-

Saturday, May 21, 2011

ಮುಂಜಾನೆ ಮಂಜು ಮಿಂದಾಗ!

ಮುಂಜಾನೆ ಮಂಜು ಮಿಂದಾಗ!

ನಗುವ ಬೆಳಕಲಿ ಕುಣಿ ಅನ್ನುತಿದೆ ಮನ,
ಮುಂಜಾನೆ ಮಂಜಿನಲಿ ಕವನ ಗೀಚೆಂದಿದೆ,
ಇಬ್ಬನಿ ಸ್ಪರ್ಶಿಸಿ ಚಾರಣವ ಮಾದೆಂಡಿದೆ,
ಮಂಜಿನಲಿ ಮಿಂದ ಹೂವ ಸಂಗಾತಿಗೆ ಮುಡಿಸೆಂದಿದೆ.

ಕೆಸರಲ್ಲಿ ಬಿದ್ದ ಚಂದಿರ !

ಯುಗಾದಿಯಂದು ಮತ್ತೊಂದು

ಹರಿವ ನೀರಿಗೆ ಬಂಗಾರದ ಲೆಪವಚ್ಚಿ ಮುಳುಗುತಿರುವ ಭಾನು,
ದಿನದ ಪಯಣವನ್ನು ಮುಗಿಸಿ ಗೂಡ ಸೇರುತಿರುವ ಹಕ್ಕಿಗಳು,
ಕೊನೆಯ ಬೇಟೆಗಾಗಿ ಕೆರೆಯಂಚಿನಲಿ ಕಾದು ಕುಳಿತ ಬೆಳ್ಳಕ್ಕಿ,
ಇದ ನೋಡುತ ಮುಸಂಜೆಯ ಹಸಿರು ಬತ್ತದ ಗದ್ದೆ ಕೆಸರಲ್ಲಿ ಬಿದ್ದ ಈ ಚಂದಿರ!
ಹೊಸ ವರುಷಕೆ ನಾಂದಿ ಹಾಡಲು ಜನರ ದರ್ಶನಕೆ ಬರುತಿದ್ದ ಆ ಚಂದಿರ!
Chandseu

Monday, March 14, 2011

ಕಾಮನಬಿಲ್ಲು

ಕಾಮನಬಿಲ್ಲು


ಪಯಣಿಸುತಲಿರಲು ಕಾಮನಬಿಲ್ಲು ಆಗಸದಲ್ಲಿ
ಒಂದಾಯಿತು ನನ್ನ ಅದರ ಪಯಣ
ಇತ್ತ ಬಣ್ಣಗಳ ವರ್ಣಿಸಲಾಗದ ನಾನು
ಅತ್ತ ಬೆಟ್ಟ ಗುಡ್ಡ ಮೋಡ ಸೀಳಿ
ನನ್ನಂದವ ನೋದೆಂಡಿತು ಕಾಮನಬಿಲ್ಲು

ಎದುರಿನ ಮುಸಂಜೆಯ ಸೂರ್ಯರಷ್ಮಿಗಳಿಗೆ ನಾಚಿಸುವ ಅಂದ
ಗೂಡಿಗೆ ಮರಳುತಿರುವ ಬೆಳ್ಳಕ್ಕಿ ಸಾಲುಗಳಿಗೆ ಸಾಟಿಯೆನ್ನುತಿದೆ ಆ ಅಂದ
ಮುಗಿಲಿಂದ ಬಣ್ಣ ತುಂಬುವತಿತ್ತು ಕಲ್ಪರುಕ್ಷಗಳಿಗೆ, ಬೆಟ್ಟ ಗುಡ್ಡಗಳಿಗೆ
ಚಿಟ್ಟೆಯೊಂದು ಕಾದು ಕೂತಿತು ಹೂವಿನ ಮೇಲೆ ನಮ್ಮಿಬ್ಬರಿಗೆ ಬಣ್ಣ ತುಂಬಲೆಂದು!!

ಎಲ್ಲರ ಚಿತ್ತ ಆಗಸದ ಅತ್ತ ಮರೆಸಿತು ಒಂದು ಕ್ಷಣ
ಬಾನಂಗಳದಲಿ ದೊಡ್ಡ ಬಣ್ಣದ ಚಂದಿರ ಬಂದಂತಿತ್ತು ಎಲ್ಲ ಬಣ್ಣಗಳ ಹೊತ್ತು
ರಂಗು ರಂಗಿನ ಬಣ್ಣ ಹಚ್ಚುವ ಈ ಮಾನವ ಧರ್ಮವೆಲ್ಲಿ ?
ಕಣ್ಣು ಮುಚ್ಚಿ ತೆರೆದಂತೆ ಬಂದು ಹೋಗುವ ನಿನ್ನ ಸುಂದರ ನೋಟವೆಲ್ಲಿ?
-Chandesu-