Tuesday, October 27, 2009

ಚಂದ್ರಾಯಣ-೪


ನೆರೆ-ನೆರವು



ನಲುಗೆದ್ದೆವು ಬರಗಾಲದ ಬವಣೆಯಲ್ಲಿ,

ಬೆಂದಿದ್ದೆವು ರಣಬಿಸಿಲಿನ ಬೀಗೆಯಲಿ,

ಹವಣಿಸುತ್ತಿತ್ತು ಜೀವ ತೊಟ್ಟು ಹನಿಗಾಗಿ,
ಬಾಯ್ತೆರೆದು ನಿಂತಿದ್ದಳು ಭೂತಾಯಿ ವರುಣನಿಗಾಗಿ.



ಅದೇನು ಶಾಪವೋ ಅಥವಾ ಹಣೆಬರವೋ,
ಬಂದಿದ್ದ ವರುಣ ಮೃತ್ಯುಕೋಪವಾಗಿ,
ತುಂಗೆಭದ್ರೆ ಕೃಷ್ಣೆಯಾದಿಯಾಗಿ,
ನಡೆದಿತ್ತು ವರುಣನ ರುದ್ರನರ್ತನ,
ಅದಕಲ್ಲಿ ಉತ್ತರ ಮೌನ!.


ನಲುಗಿರಲು ಧರೆ ಜಲಧಾರೆಯಲಿ,
ಬೇಡಿತ್ತು ಎಲ್ಲಿರ ಹೃದಯ ಬಡಿತ,
ಗುಡಿ ಗಂಟೆಯ ಬದಲಾಗಿ,
ಜೀವ ಸಂಕುಲ ರಕ್ಷಣೆಗಾಗಿ,
ಆವರಿಸಿತ್ತು ನಿರಾಳ ಮೌನ,
ಬದುಕಾಯಿತು ಮೂರಾಬಟ್ಟೆ.


ಕೊಚ್ಹಿ ಹೋದವು ಮನೆ ಮಠಗಳೆಲ್ಲ ಗಂಗೆಯಲಿ,
ಮೊಳೆಕೆಹೊಡೆದವು ಬೆವರು ಹರಿಸಿ ಕೂಡಿಟ್ಟಿದ್ದ ದವಸ ಧಾನ್ಯಗಳೆಲ್ಲ,
ಮೌನವಾದಳು ಅದೇ ಪಕೃತಿ ಮಾತೆ, ಹಕ್ಕಿ ಪಕ್ಷಗಳ ನಾದಸ್ವರವಿಲ್ಲದೆ,

ರಕ್ಕಸತಂಗಡಿಯಾಯಿತು ಮತ್ತೊಮ್ಮೆ ಈ ಭೂಮಿ.

ಎತ್ತನೋಡಿದರೆಲ್ಲಿ ಸ್ಮಶಾನ ಮೌನ,
ಹುದುಕದಂತಾದವು ಮಾಗುತಿಹ ಮನಗಳು,
ಸಿಗದ ಉತ್ತರವ, ಪ್ರಶ್ನೆಗಳ ಸರಮಾಲೆಯ, ಕಾಣದ ದಾರಿಯ.....


ಹರಿಯುತಲಿದೆ ಮಾನವತೆಯ ನೆರವು ಎಲ್ಲೆಡೆಯಿಂದ ಉತ್ತರಡೆಗೆ,
ಹಸಿದ ಹೊಟ್ಟೆಗೆ ತುತ್ತಿಕಲು, ನೊಂದ ಜೀವ ಸಂತೈಸಲು,
ನಾಳಿನ ಬದುಕಿಗೆ ಭರವಸೆ ತುಂಬಲು.

ಬಾಳಬಂಡಿಯ ನೊಗ ಇನ್ದೆಂದೂ ಕಳಚದಿರಲಿ,
ಸಾಗಲಿ ಈ ಬದುಕ ಪಯಣ ಹೊಸ ಕನಸುಗಳ ಹೊತ್ತು,
ಬೆಳಗಲಿ ಮುಂದಿನ ಬಾಳು ದೀವಳಿಗೆಯ ದೀಪದಂತೆ,
ಬನ್ನಿ ಆ ದೀಪಗಳ ಹಚ್ಚಲು ಎಲ್ಲರೂ ಕೈ ಜೋಡಿಸೋಣ,
ಮಾನವತೆಯ ಬಾವುಟ ಹಾರಿಸುವ....

--chandseu--



Thursday, October 8, 2009

ಚಂದ್ರಾಯಣ-೩

ಏನಿದು ?

ಮನ ಹೊಯ್ದಾಡಿದೆ ಬಿರುಗಾಳಿಗೆ ಸಿಕ್ಕ ಮೋಡದಂತೆ,

ಓಡುತಿದೆ ಸಾಗರಡೆಗೆ ತುಂಬಿದ ನದಿಯಂತೆ,

ಒಂದು ಕ್ಷಣ ಮುಗ್ದ ಮಗುವಂತಾಗಿದೆ,

ಏನೆಂದು ಹೇಳಲಿ ಮನದೊಳಗುಂಟಾಗಿರುವ ಈ ಆತಂಕವ,

ಅನುಭವಿಸುತ್ತಿರುವ ಈ ಸಿಹಿ ನೋವ,

ನಾ ಬಲ್ಲೆ ಇದಕೆಲ್ಲ ನೀ ಹೊಣೆಎಂದು,

ಎಲೆ ಚೆಲುವೆ, ನೀ ಬಲ್ಲೆಯಾ... ಈ ತವಕವ,

ಬಾ ಬಂದುಬಿಡು ಸೇರಿಕೋ ಈ ನನ್ನ ಹೃದಯವ.

----------

chandseu


ಗುಪ್ತಗಾಮಿನಿ.
ಮುಗಿಲ ಮಂಥನ ನೋಡುತಿರುವೆಯೋ?
ತಂಗಾಳಿಯನ್ನು ಅಹ್ಲಾದಿಸುತಿರುವೆಯೋ?
ಸಾಗರದ ಅಲೆಯಲ್ಲಿ ನಿನ್ನ ಭಾವನೆಗಳನ್ನು ಲೀನಗೊಳಿಸುತಿದ್ದಿಯೋ?
ಎಲೆ ಬಾಲೆ, ನಿನ್ನ ಚಂದದ ಮೊಗವ ತೋರಿಸೀಕಡೆ,

ಗೀಚುವೆ ಇನ್ನೊಂದು ಗೀತೆಯ!!
-------------


ಸುದಿನ.


ಮರಳಿಹುದು ಮತ್ತೊಂದು ವಸಂತ ನಿಮ್ಮ ಬಾಳಲಿ,

ಬದುಕು ಸಾಗಿದೆ ಬದಲಾವಣೆಯ ಗುಂಗಿನಲಿ,

ಬೆಳಗಲಿ ನಿಮ್ಮ ಬಾಳು ಮೂಡಣದ ಸೂರ್ಯ ರಶ್ಮಿಯಂತೆ,

ಚಿಗುರಲಿ ಹೊಸ ಕನಸುಗಳು ಪೌರ್ಣಿಮೆಯನೆದುರು ನೋಡುತಿರುವ ಚಂದ್ರನಂತೆ,

ಮತ್ತೆ ಮತ್ತೆ ಬರುತಿರಲಿ ಈ ಸುದಿನ ನಿಮ್ಮ ಬಾಳಲಿ,

ಇದೋ ಈ ಪುಟ್ಟ ಹೃದಯದ ಹಾರೈಕೆ ನಿಮ್ಮ ಈ ಸುದಿನಕೆ

-----------
chandseu.