Thursday, October 8, 2009

ಚಂದ್ರಾಯಣ-೩

ಏನಿದು ?

ಮನ ಹೊಯ್ದಾಡಿದೆ ಬಿರುಗಾಳಿಗೆ ಸಿಕ್ಕ ಮೋಡದಂತೆ,

ಓಡುತಿದೆ ಸಾಗರಡೆಗೆ ತುಂಬಿದ ನದಿಯಂತೆ,

ಒಂದು ಕ್ಷಣ ಮುಗ್ದ ಮಗುವಂತಾಗಿದೆ,

ಏನೆಂದು ಹೇಳಲಿ ಮನದೊಳಗುಂಟಾಗಿರುವ ಈ ಆತಂಕವ,

ಅನುಭವಿಸುತ್ತಿರುವ ಈ ಸಿಹಿ ನೋವ,

ನಾ ಬಲ್ಲೆ ಇದಕೆಲ್ಲ ನೀ ಹೊಣೆಎಂದು,

ಎಲೆ ಚೆಲುವೆ, ನೀ ಬಲ್ಲೆಯಾ... ಈ ತವಕವ,

ಬಾ ಬಂದುಬಿಡು ಸೇರಿಕೋ ಈ ನನ್ನ ಹೃದಯವ.

----------

chandseu


ಗುಪ್ತಗಾಮಿನಿ.
ಮುಗಿಲ ಮಂಥನ ನೋಡುತಿರುವೆಯೋ?
ತಂಗಾಳಿಯನ್ನು ಅಹ್ಲಾದಿಸುತಿರುವೆಯೋ?
ಸಾಗರದ ಅಲೆಯಲ್ಲಿ ನಿನ್ನ ಭಾವನೆಗಳನ್ನು ಲೀನಗೊಳಿಸುತಿದ್ದಿಯೋ?
ಎಲೆ ಬಾಲೆ, ನಿನ್ನ ಚಂದದ ಮೊಗವ ತೋರಿಸೀಕಡೆ,

ಗೀಚುವೆ ಇನ್ನೊಂದು ಗೀತೆಯ!!
-------------


ಸುದಿನ.


ಮರಳಿಹುದು ಮತ್ತೊಂದು ವಸಂತ ನಿಮ್ಮ ಬಾಳಲಿ,

ಬದುಕು ಸಾಗಿದೆ ಬದಲಾವಣೆಯ ಗುಂಗಿನಲಿ,

ಬೆಳಗಲಿ ನಿಮ್ಮ ಬಾಳು ಮೂಡಣದ ಸೂರ್ಯ ರಶ್ಮಿಯಂತೆ,

ಚಿಗುರಲಿ ಹೊಸ ಕನಸುಗಳು ಪೌರ್ಣಿಮೆಯನೆದುರು ನೋಡುತಿರುವ ಚಂದ್ರನಂತೆ,

ಮತ್ತೆ ಮತ್ತೆ ಬರುತಿರಲಿ ಈ ಸುದಿನ ನಿಮ್ಮ ಬಾಳಲಿ,

ಇದೋ ಈ ಪುಟ್ಟ ಹೃದಯದ ಹಾರೈಕೆ ನಿಮ್ಮ ಈ ಸುದಿನಕೆ

-----------
chandseu.


















2 comments:

  1. ಯಾರೊ ನಿನ್ನ ಮನಸ್ಸಲ್ಲಿ ಒ೦ದಿಷ್ಟು ಗಲಿಬಿಲಿ ಮಾಡಿದ್ದಾರೆ,
    ಯಾರೊ ಗುಪ್ತಾಗಾಮಿನಿಯ೦ತೆ ಹರೀತಾ, ಜೀವನವನ್ನ ಅಹ್ಲಾದ ಮಾಡಿದ್ದಾರೆ,
    ಒಟ್ಟಲ್ಲಿ ಅ ಹುಡುಗೀನ ಸೇರೊ ಸುದಿನ ಬೇಗ ಬ೦ದು ಹಾಳಾಗಿ ಹೊಗು ಎ೦ದು ಹಾರೈಸುವೆ...

    ReplyDelete
  2. ಇದೇನು ಹಾರೈಕೆಯೋ ? ಶಾಪವೋ,,,, ನಾ ಅರಿಯೇ.

    ReplyDelete