ಕವಿತೆ ನೀ ಎಲ್ಲಿದ್ದೆ!!
ಚಳಿಗಾಲದ ಮಂಜಿನಲಿ ಮಲಗಿದ್ದೆಯಾ ಒದ್ದೆ ಮನಸಿನಲಿ!!,,
ಮಲೆನಾಡಿನ ಮಳೆಯ ತುಂತುರು ಹನಿಯಲ್ಲಿದ್ದೆಯಾ?
ಸೂರ್ಯಕಾಂತಿ ಹೂವಿನ ರಸದಲಿ ಚಿಟ್ಟೆಗೆ ಆಹಾರವಾಗಿದ್ದೆಯಾ ?
ವಸಂತ ಋತುವಿನ ಚಿಗುರೆಲೆಯಲಿಯಿದ್ದೆಯಾ?
ಬತ್ತದ ಹಾಲು ತೆನೆಯಾಗಿದ್ದೆಯಾ ಬಲು ಪೈರು ಕೊಡಲು?
ಮುಸಂಜೆಯ ಮೊಡಗಳಾಗಿದ್ದೆಯ ಮುಂಗಾರು ಮಳೆ ಹೊಯ್ಯಲು ?
ಚಂದಿರ ಜೊತೆ ಆಟವಾಡುತಿ ದ್ದೆಯಾ ಮಗುವಿನಂತೆ?
ಸೂರ್ಯೋದಯದ ಕೆಂಪು ವರ್ಣದಲ್ಲಿ ಅಡಗಿದ್ದೆಯಾ ಪ್ರುಥ್ವಿಯನ್ನು ಅಲಂಕರಿಸಲು!
ಕೊಲುಮಿಂಚಾಗಿದ್ದೆಯಾ ಭಯಹುಟ್ಟಿಸಲು ಮುದ್ದು ಕಂದಮ್ಮಗಳಿಗೆ?
ತಾರೆ ಬೆಳಕಾಗಿರುವೆ ಗಗನ ಬೆಳಗಲು ಚಂದಿರನ ಜೊತೆಗೆ?
ಹಸುಗೂಸುವಿನ ನಗುವಿನಲ್ಲಿದ್ದೆಯಾ ?
ತಾಯಿ ತಂದೆಯರ ಪ್ರೀತಿ-ವಾಸ್ತಲ್ಯದಲ್ಲಿದ್ದೆಯಾ ?
ಅನಾಥ ಮಕ್ಕಳ ಕಂಬನಿಯಾಗಿದ್ದೆಯಾ ?
ವೃದ್ದ ದಂಪತಿಗಳ ಮೌನದಾಳದ ಮಾತಾಗಿದ್ದೆಯಾ ?
ಈ ಚಂದಿರನ ಅಂಗಳದಲ್ಲೇಕೆ ನಿನ್ನ "ಮೌನ" ಇಷ್ಟು ದಿನ?
-chandseu-
No comments:
Post a Comment