Wednesday, November 18, 2009

ಚಂದ್ರಾಯಣ-೪






ಏನಾಗುವೆ ?


ಹಸಿರೆಲೆಯಾಗುವೇನು ನೀ ಅದರ ಮೇಲೆ ಇಬ್ಬನಿಯಾಗುವೆಯಾ?

ಭಾವನೆಗಳಾಗುವೆಯ ನನ್ನ ಹೃದಯ ಸಮುದ್ರಕೆ?

ಚಿತ್ರಕಾರನಾಗುವೇನು ನನ್ನ ಮನೋಜ್ಞ ಚಿತ್ರಕೆ ನೀ ಸ್ಪೂರ್ತಿಯಾಗುವೆಯಾ?

ಬೆಳಕಾಗುವೆಯಾ ನೀ ಈ ದುರ್ಗಮ ಕತ್ತಲು ಹಾದಿಯಲಿ?

ಜೋತೆಯಾಗುವೆಯಾ ನನ್ನ ಬಾಳ ಪಯಣದ ಸಂಗಾತಿಯಾಗಿ?

ಹೇಳೇ ಚೆಲುವೆ ಇನ್ನೆಷ್ಟು ದಿನ ಈ ಮೌನ......
-----

Tuesday, November 17, 2009

ಅರಮನೆ ನಗರಿಯಲಿ ಇನ್ನೊಂದು..




ಪ್ರೀತಿಯ ಪರಾಕಾಷ್ಟೆ.


ಕೂಗಿದೆ ನನ್ನವಳನು ಇರುಳಲಿ ಸುರಿಯುತಿರುವ ಸ್ವಾತಿ ಮಳೆಯಲಿ,

ಅವಳ ಹೃದಯ ಸ್ಪಂದಿಸಿತ್ತು ಅತ್ತ,

ಸಿಹಿಯಾಯಿತೆನ್ನ ಅಧರ ಒಂದು ಹನಿಗೆ ಇತ್ತ,

ಪಿಸುಗೂಡಿತು ಇಷ್ಟು ಸಾಕೆಂದು ಇಂದು,

ಮರಳಿ ಬರುವೆನು ಮುಂಜಾನೆಯ ಎಳೆಬಿಸಿಲಾಗಿ

ಚುಂಬಿಸಲು ಕೆನ್ನೆಗೆ ಇನ್ನೊಂದು... !

---------

ಅರಮನೆ ನಗರಿಯಲಿ ಹುಟ್ಟಿದ ಸಿಹಿ ಸಿಹಿ .....


ಹೇಗೆ ಬಣ್ಣಿಸಲಿ ನಿನ್ನ?

ನಾ ಮೌನಿಯಾಗಿರುವೆ ನಿನ್ನ ಬಣ್ಣಿಸ ಹೋಗಿ,

ಈ ನನ್ನ ಮೌನ ಹೇಳಿತಿಹುದು ನೀನೆಷ್ಟು ಸಿಹಿ ಮನಸಿನವಳೆಂದು,

ನಾ ಹೇಗೆ ಝೇoಕರಿಸಲಿ ನಿನ್ನ ಆ ಸಿಹಿ ಮನಸನು ನನ್ನ ಈ ಪಿಸುಮಾತಲಿ,

ಇದೋ ನಾ ಸೋತೆ ನಿನಗೆ, ಕಾದಿರುವೆ ನಿನ್ನ ಶಿಕ್ಷೆಗಾಗಿ..... !

Saturday, November 7, 2009

ಚಳಿಗಾಲದಲೊಂದು...



ಹೀಗೇಕೆ ಓ ಮನವೇ...

ತುಂಬಿದ ಕೊಡದಂತಾಗಿದೆ ಹೃದಯ ನಿನ್ನ ನೆನಪಿನಲಿ,

ಮನ ಹೊತ್ತು ನಿಂತಿದೆ ಭಾವನೆಗಳ ಝೆoಕರಿಸಲು,

ಕಣ್ಣುಗಳು ಕಾದಿವೆ ಭಕಪಕ್ಷಿಯಂತೆ ನಿನ್ನ ನೋಡಲು,

ಕಾತುರದಿ ಎದುರು ನೋಡುತಿವೆ ಹಸ್ತಗಳು ನಿನ್ನ ಸ್ಪರ್ಶಕೆ,

--------

Tuesday, October 27, 2009

ಚಂದ್ರಾಯಣ-೪


ನೆರೆ-ನೆರವು



ನಲುಗೆದ್ದೆವು ಬರಗಾಲದ ಬವಣೆಯಲ್ಲಿ,

ಬೆಂದಿದ್ದೆವು ರಣಬಿಸಿಲಿನ ಬೀಗೆಯಲಿ,

ಹವಣಿಸುತ್ತಿತ್ತು ಜೀವ ತೊಟ್ಟು ಹನಿಗಾಗಿ,
ಬಾಯ್ತೆರೆದು ನಿಂತಿದ್ದಳು ಭೂತಾಯಿ ವರುಣನಿಗಾಗಿ.



ಅದೇನು ಶಾಪವೋ ಅಥವಾ ಹಣೆಬರವೋ,
ಬಂದಿದ್ದ ವರುಣ ಮೃತ್ಯುಕೋಪವಾಗಿ,
ತುಂಗೆಭದ್ರೆ ಕೃಷ್ಣೆಯಾದಿಯಾಗಿ,
ನಡೆದಿತ್ತು ವರುಣನ ರುದ್ರನರ್ತನ,
ಅದಕಲ್ಲಿ ಉತ್ತರ ಮೌನ!.


ನಲುಗಿರಲು ಧರೆ ಜಲಧಾರೆಯಲಿ,
ಬೇಡಿತ್ತು ಎಲ್ಲಿರ ಹೃದಯ ಬಡಿತ,
ಗುಡಿ ಗಂಟೆಯ ಬದಲಾಗಿ,
ಜೀವ ಸಂಕುಲ ರಕ್ಷಣೆಗಾಗಿ,
ಆವರಿಸಿತ್ತು ನಿರಾಳ ಮೌನ,
ಬದುಕಾಯಿತು ಮೂರಾಬಟ್ಟೆ.


ಕೊಚ್ಹಿ ಹೋದವು ಮನೆ ಮಠಗಳೆಲ್ಲ ಗಂಗೆಯಲಿ,
ಮೊಳೆಕೆಹೊಡೆದವು ಬೆವರು ಹರಿಸಿ ಕೂಡಿಟ್ಟಿದ್ದ ದವಸ ಧಾನ್ಯಗಳೆಲ್ಲ,
ಮೌನವಾದಳು ಅದೇ ಪಕೃತಿ ಮಾತೆ, ಹಕ್ಕಿ ಪಕ್ಷಗಳ ನಾದಸ್ವರವಿಲ್ಲದೆ,

ರಕ್ಕಸತಂಗಡಿಯಾಯಿತು ಮತ್ತೊಮ್ಮೆ ಈ ಭೂಮಿ.

ಎತ್ತನೋಡಿದರೆಲ್ಲಿ ಸ್ಮಶಾನ ಮೌನ,
ಹುದುಕದಂತಾದವು ಮಾಗುತಿಹ ಮನಗಳು,
ಸಿಗದ ಉತ್ತರವ, ಪ್ರಶ್ನೆಗಳ ಸರಮಾಲೆಯ, ಕಾಣದ ದಾರಿಯ.....


ಹರಿಯುತಲಿದೆ ಮಾನವತೆಯ ನೆರವು ಎಲ್ಲೆಡೆಯಿಂದ ಉತ್ತರಡೆಗೆ,
ಹಸಿದ ಹೊಟ್ಟೆಗೆ ತುತ್ತಿಕಲು, ನೊಂದ ಜೀವ ಸಂತೈಸಲು,
ನಾಳಿನ ಬದುಕಿಗೆ ಭರವಸೆ ತುಂಬಲು.

ಬಾಳಬಂಡಿಯ ನೊಗ ಇನ್ದೆಂದೂ ಕಳಚದಿರಲಿ,
ಸಾಗಲಿ ಈ ಬದುಕ ಪಯಣ ಹೊಸ ಕನಸುಗಳ ಹೊತ್ತು,
ಬೆಳಗಲಿ ಮುಂದಿನ ಬಾಳು ದೀವಳಿಗೆಯ ದೀಪದಂತೆ,
ಬನ್ನಿ ಆ ದೀಪಗಳ ಹಚ್ಚಲು ಎಲ್ಲರೂ ಕೈ ಜೋಡಿಸೋಣ,
ಮಾನವತೆಯ ಬಾವುಟ ಹಾರಿಸುವ....

--chandseu--



Thursday, October 8, 2009

ಚಂದ್ರಾಯಣ-೩

ಏನಿದು ?

ಮನ ಹೊಯ್ದಾಡಿದೆ ಬಿರುಗಾಳಿಗೆ ಸಿಕ್ಕ ಮೋಡದಂತೆ,

ಓಡುತಿದೆ ಸಾಗರಡೆಗೆ ತುಂಬಿದ ನದಿಯಂತೆ,

ಒಂದು ಕ್ಷಣ ಮುಗ್ದ ಮಗುವಂತಾಗಿದೆ,

ಏನೆಂದು ಹೇಳಲಿ ಮನದೊಳಗುಂಟಾಗಿರುವ ಈ ಆತಂಕವ,

ಅನುಭವಿಸುತ್ತಿರುವ ಈ ಸಿಹಿ ನೋವ,

ನಾ ಬಲ್ಲೆ ಇದಕೆಲ್ಲ ನೀ ಹೊಣೆಎಂದು,

ಎಲೆ ಚೆಲುವೆ, ನೀ ಬಲ್ಲೆಯಾ... ಈ ತವಕವ,

ಬಾ ಬಂದುಬಿಡು ಸೇರಿಕೋ ಈ ನನ್ನ ಹೃದಯವ.

----------

chandseu


ಗುಪ್ತಗಾಮಿನಿ.
ಮುಗಿಲ ಮಂಥನ ನೋಡುತಿರುವೆಯೋ?
ತಂಗಾಳಿಯನ್ನು ಅಹ್ಲಾದಿಸುತಿರುವೆಯೋ?
ಸಾಗರದ ಅಲೆಯಲ್ಲಿ ನಿನ್ನ ಭಾವನೆಗಳನ್ನು ಲೀನಗೊಳಿಸುತಿದ್ದಿಯೋ?
ಎಲೆ ಬಾಲೆ, ನಿನ್ನ ಚಂದದ ಮೊಗವ ತೋರಿಸೀಕಡೆ,

ಗೀಚುವೆ ಇನ್ನೊಂದು ಗೀತೆಯ!!
-------------


ಸುದಿನ.


ಮರಳಿಹುದು ಮತ್ತೊಂದು ವಸಂತ ನಿಮ್ಮ ಬಾಳಲಿ,

ಬದುಕು ಸಾಗಿದೆ ಬದಲಾವಣೆಯ ಗುಂಗಿನಲಿ,

ಬೆಳಗಲಿ ನಿಮ್ಮ ಬಾಳು ಮೂಡಣದ ಸೂರ್ಯ ರಶ್ಮಿಯಂತೆ,

ಚಿಗುರಲಿ ಹೊಸ ಕನಸುಗಳು ಪೌರ್ಣಿಮೆಯನೆದುರು ನೋಡುತಿರುವ ಚಂದ್ರನಂತೆ,

ಮತ್ತೆ ಮತ್ತೆ ಬರುತಿರಲಿ ಈ ಸುದಿನ ನಿಮ್ಮ ಬಾಳಲಿ,

ಇದೋ ಈ ಪುಟ್ಟ ಹೃದಯದ ಹಾರೈಕೆ ನಿಮ್ಮ ಈ ಸುದಿನಕೆ

-----------
chandseu.


















Friday, September 18, 2009

ಚಂದ್ರಾಯಣ-೨

ನನ್ನವಳ ಮುತ್ತು !!

ಪ್ರೇಯಸಿಗೊಂದು ಕೇಳಿದೆ ಮುತ್ತು,
ಬೇಡವೆಂದಳು ಈಗ ಅದು ಆಪತ್ತು,
ಮುಂದೆ ನಮ್ಮಿಬ್ಬರ ಜೀವನಕ್ಕೆ ಅದು ಆಗಬಹುದು ಕುತ್ತು,
ಇಲ್ಲವೇನೆ ನಿನಗೆ ಕರುಣೆ ಕಿಂಚಿತ್ತು,
ಇರಲಾರೆನು ನಿನ್ನ ಮುತ್ತು ಬಿಟ್ಟು ಬಿಟ್ಟು,
ಕೊಡು ಈಗ ಮತ್ತು ಮತ್ತು ಮತ್ತು .... -------

ಏಲ್ಲಿರುವಳೂ?


ಕಣ್ಣಂಚಿನಲಿ ಸೆಳೆಯುಥಿರುವ ಆ ಮಿಂಚು,
ಸಣ್ಣಗೆ ನಡುಗುತ ಮುದಲಿಸಿದ ಆ ಕಿರು ನಗೆ ,
ರವಾನಿಸಿದವು ಏನನ್ನೋ ಕ್ಷಣರ್ದದಲಿ,
ಸ್ಪಂದಿಸಲಿತ್ತು ನನ್ನ ಹೃದಯ ಆ ಸನ್ನೆಗೆ,
ಏನೆಂದು ಕಲ್ಪಿಸುವಷ್ಟರಲಿ ಕಂಡಿದ್ದು ಮಾತ್ರ ನೀಳ ಕೇಶರಾಶಿ,
ಅವಳುಟ್ಟ ಬಾದಾಮಿ ರೇಷಿಮೆ ಸಿರೆಯಲಿ,
ಏನೆಂದಳೆಂದು ಮನ ಹುಡುಕ ಹೊರಟಿತು ಅವಳತ್ತ ,
ತೆರೆದಿದ್ದವು ನನ್ನ ಕಣ್ಣುಗಳು ಹೊರಳಾಡುತ್ತಾ ಹಾಸಿಗೆಯಲಿ!,
ಅಂದಿನಿಂದ ಹುಡುಕುತಿರುವೆ ಆ ಮಾಯಂಗನೆಗೆ,
ಎಲ್ಲಿರಿಳುವಲೋ ಆ ನನ್ನ ಮಾಯೆ?.....
--------

Friday, April 17, 2009

ಮೊದಲ ಪ್ರಯತ್ನ

ಮೊದಲ ಯತ್ನ .

ಜಗದೊಳಗಿರುವ ಚಂದ್ರಬಿಂಬದಲಿ ಶಿಲ್ಪಕಲಾಕೃತಿಯು ಶೋಬಿಸುಥಿದೆ ನೋಡಾ ಶಂಕರಾ.
-----

'ಪರಿಣಾಮ'

ನಿನ್ನ ನೋಡಿದಾಗ ಆಯಿತು ನನಗೆ ಒಂಥರಾ,

ರಾತ್ರಿಯೆಲ್ಲ ಕನಸು ಥರ ಥರ,

ಮುಂಜಾನೆ ಎದ್ದು ನೋಡಿದರೆ ನನಗೆ ಬಂದಿತು ನಿಲ್ಲದ ಜ್ವರ...
------



"ದೇವದಾಸ"

ಓ ಚೆಲುವೆ,
ನೀ ಸಿಗಲಿಲ್ಲವೆಂದು ನಾ ಆಗಲಿಲ್ಲ ದೇವದಾಸ,
ಎಲ್ಲರಂತೆ ಜೀವನದಲ್ಲಿ ಪಡುತಿರುವೆ ಹರಸಾಹಸ,
ನೀನಿಲ್ಲದಿದ್ದರೇನು ಇದೆಯಲ್ಲ ನನಗೆ ಈ ಪ್ರಾಸ,
ಅಗಾಗ ನನ್ನವಳಿಂದ ಆಗುವುದು ಉಪವಾಸ,
ಆದರೂ ನಾ ಅವಳಿಗೀಗ ದೇವಿ ದಾಸ!!... ----

'ಕನಸು'

ಕಣ್ಣು ಮುಚ್ಹಿದರೂ ಕನಸು,

ಕಣ್ಣು ತೆರೆದರೂ ಕನಸು,

ಮಿಂಚುವ ಮಗುವ ಕಣ್ಣಲ್ಲಿ ಅದೇನೋ ಕನಸು,

ಅರಳುತಿರುವ ಹೂವಿನಲೊಂದೇನೋ ಹೊಂಗನಸು,

ಮನಸಿನ ಭಾವನೆಗಳನ್ನು ಕಲಕುವ ಈ ಕನಸು ಎಂದಾಗುವುದು ನನಸು?

-chandseu-