ಒಂದು ರಾತ್ರಿ ಮಹಡಿಯ ಮೇಲೆ!
ರಂಗೇರಿದೆ ಮೋಡಗಳು ಚಂದಮನ ಮದ್ಯ ಪ್ರವೇಶದಲಿ
ಆಹಾ ಅದೆಂತ ನೋಟ!
ಬಿಳಿ ಮೋಡಗಳು ಪುಷ್ಪಕವಿಮಾನದಲಿ ಚಂದ್ರನ ಹೊತೈಯುತಿವೆ ಮದುವಣಗಿತ್ತಿಯಂತೆ!
ಅಲ್ಲಿ ಕಂಗೊಳಿಸುತಿರುವ ತಾರೆಗಳೇ ಹೊತೊಯುತಿರುವ ರಾಜಭಟರು
ತಂಗಾಳಿಯೇ ಚಾಮರವು
ಮದುವಣಗಿತ್ತಿ ಚಂದಿರ ಆಗಾಗ ಮೋಡವೆಂಬ ಪರೆದೆ ಸರಿಸಿ ಇಣುಕಿ ನೋಡುತಿರಲು,
ಬೆಳಗಿತು ಭೂಲೋಕ ತಂಗಾಳಿಯ ಬೆಳದಿಂಗಳಲಿ,
ಇದ ನೋಡುತ ನರಮಾನವ ಮೂಕವಿಸ್ಮಿತ!
No comments:
Post a Comment