Tuesday, November 23, 2010

ಅವಕಾಶವಾದಿಗಳು.


:ಅವಕಾಶವಾದಿಗಳು:


ನಗುವರಿಲ್ಲಿ ನಗಿಸಿ ಸ್ನೇಹವ ಬೆಳೆಸುವರು
ಬೆಳೆಸಿ ನಿಮ್ಮ ಹೊಗಳುವರು
ಹೊಗಳಿ ನಿಮ್ಮ ದುರ್ಬಲತೆ ಅರಿಯುವರು
ಅರಿತು ಸಹಾಯ ಮಾಡುವಂತೆ ಮಾಡುವರು
ಒಮ್ಮೊಮ್ಮೆ ಪ್ರೀತಿಯಂತೆ ನಟಿಸುವರು
ನಟಿಸಿ ನಿಜ ಸ್ನೇಹವೆನ್ನುವರು

ಮರೆಯುವರು ನಿಮ್ಮನು ನೀವು
ಅವರ ನೆರವಿಗೆ ಹೋಗದಿದ್ದರೆ
ನಿಮ್ಮನು ಮರೆತರೆ ಹೋಗಲಿ
ಕೃತಜ್ಞ ಭಾವನೆ ಮರೆಯುವರಲ್ಲ
ಮಾತು ಬಿದುವರಲ್ಲ ಅವರ ಕಷ್ಟ
ಹಂಚಿಕೊಂಡು ನೀವು ಮಾಡಿದ
ಉಪಕಾರವ ಮರೆತು ಹೊಸ ದಾರಿಯಲಿ

ಸಿಹಿ ಉಂಡು ಮೊದಲು
ನಂತರ ತೆಗಳುವರಲ್ಲ ನಿಮ್ಮ್ಮನು
ಅತಿಥಿಯೆಂದು ಕರೆದು ಅವಮಾನಿಸುವರಲ್ಲ
ಪ್ರಾಣ ಸ್ನೇಹಿತನೆಂದು ಹೇಳಿ
ಮರೆಯಾಗುವರಲ್ಲ ಒಂದು ಮಾತಿಲ್ಲದಂತೆ

ತಮ್ಮ ಬೆಳೆಯ ಬೇಯಿಸಿಕೊಳ್ಳುವರು
ಕಪಟ ಸ್ನೇಹವ ಬೆಳೆಸಿ
ಬೆಲೆಯಿಲ್ಲದಾಗಿದೆ ಕಲಿಯುಗದಲಿ
ನಿಜ ಸ್ನೇಹಕೆ ನಿಷ್ಕಲ್ಮಶ ಪ್ರೀತಿಗೆ
ಮಾನವತೆ, ಕೃತಜ್ಞತೆ ಮರೆತ
ಇಂತಹ ಅವಕಾಶವಾದಿ ಜನಗಳಿಂದ.
-Chandseu-

Wednesday, November 17, 2010

Memorable Trekking


One of my favorite trek places is Sharavathi Valley Rain forest. It is the part of Western Ghats known as the Sahyadri Mountains, is a mountain range along the western side of India. It runs north to south along the western edge of the Deccan Plateau, and separates the plateau from a narrow coastal plain along the Arabian Sea. The Western Ghats block rainfall to the Deccan Plateau. About sixty percent of the Western Ghats are located in the state Karnataka.

Sharavathi Valley is still untouched by corrupt humans...It’s about 350 Km from Bangalore. This valley inhabitant is very nice people too.
After the serial cancelation of trekking events, I arranged one more trekking event on 25th and 26th of September. It was an activity arranged for a trekking group in our office after I got so many requests from colleagues around me. Even though I announced 10 days before, was managed to get 8 peoples which was decent numbers to conduct a trek.
It was not good start on the first day of our activities as we were running late. The leaches troubled us initially when we started trek to Bhameshra water falls. We had a nice time in Water falls. By the time we came back we skipped our lunch time and it was difficult for every one to trek back from water falls. After all struggle we are managed to reach the place where the lunch was ready. Soon after having our lunch we started our journey by Jeep to Meguru.

It was around 5 PM we started our trek to peak point where we can see sunset and the Arabian Sea. Our group reached the point and the experience was awesome. The nature dance was started with running clouds, sun hiding under the clouds. Oh! It was one of the best moments in my life under the nature. We clicked some good snaps over there.
Day 2
Kashaya, akki rotti chatni and water as break fast made the beginning of Day.
We started early morning by 8.00 to reach the water falls. It was nightmare experience in thick forest for us to have leeches. There was a long zig zag , treacherous, slippery route with hardly any holds to descend down. Each one took extreme caution descending down. Thankfully none had any major fall except me which happened first day at night trek! I was struggling bit with my knee pain. Some how I managed to do it on par with my trek mates. Guide Sridhar helped me a lot. I used interact with lot about Malenaadu lifestyle.
We could hear stream sound but we took our own time to locate the stream location. This water fall is quite special in its ways. A person who sees it from the top can’t make out the width, glory and the mild roar. It flows like a jhulu jhulu stream but then opens up to a big waterfall. It also hosts a pond at the foot of the waterfall. Only a few made it to the bottom of the waterfall. We could hardly come out of the ecstasy, but by the time we realized we should come out of water, food was ready and the sight of food made us even hungrier. We hogged like anything & had nice rice sambar with pickle & papad. We slept for some time on the rocks.
Usually people enjoy the trek in many of their own way, like some people enjoy climbing to the peaks, some people enjoy trekking on snow clad mountains etc., but I enjoy walking along with the streams and watching water falls and heavy rain in evergreen forests a lot. My dream became true on second day when we were coming back from the stream. We started our trek back towards 90’ steep uphill. By the time we reached point where the water is flowing towards down the hill, it was raining heavily. Oh my god!! What best you can ask for it. We all enjoyed our trek around 2 KM trek in Small River.

On the way back it was difficult trek with slippery mountains leeches inside our shoes. We took off our shoes (some people Cloths!) to free from the leeches.
I have committed my group it will be moderate trek, but the trek was combination of easy moderate, tough & night trek with horrible leeches attack.
In all it was a great trek of series of big and small water falls and Sweat Trek - for me it was a jinx breaking trek.- Chandru
It was a dream comes true for me. On this trip, I saw Mother Nature in all her glory. Her amazing beauty - that amazing sunset on the first day, that trek in the rain, the simple meal we had at the falls the second day that was the tastiest ever, and even all those leeches we still have nightmares about, has me enchanted and will remember them for ever.
I want experience all those things again. When are we going back?
- Ashimjyoti Das
“It was an awesome experience with the life in jungle for two days.
One has to experience such kind of trekking in life time.
Finally we did it
-Pradeep.
There is nothing like walking to get the feel of a country. A fine landscape is like a piece of music and a jungle full of leaches…..!
Trekking in Sharavathy valley was a great experience ….!
-Umashankar Sinha
Eyes will always remember those views; Brain will always remember that silence, Heart will always remember that happiness, Mouth will always remember the Kashaaya, Limbs will always remember the pain and Feet will always remember those leeches!
-Ritesh Kumar
It was a thrilling experience, awesome jungle, chilling falls, walk on the river with rain at same time and horror leaches (only for day1 though). The jeep ride in the climax was really great. Altogether it was two day’s of non stop action/ adventure
-Manjunath Mani
The trekking trip was indescribable! More incredible than I ever imagined!
The crossing of river in rain was amazing. This fun could not be bought by money, it comes at effort.
-Jagat Singh Rathore
You haven’t been to Sharavathi Valley? Well then, you aint seen anything yet....!'

It’s not everyday we get to climb a slippery mountain 90 degree up without a harness…nor we get to walk in a river with thunderstorms. And after all the bloodshed (read 'Leech Attack' :) ) , "It was totally worth it". Nature is at its pristine beauty.
- Shankarmurthy Bhat

-------------------------------------------------------------------------------------------------

For more Pictures please visit http://picasaweb.google.com/chandseu/MemorableTrekking#

--------------------------------------------------------------------------------------------------

Wednesday, September 15, 2010

ಬಾಳ ಮರುಭೂಮಿಯಲಿ ಒಯಸಿಸಿನಂತೆ ಬಂದೆ ನೀ


ಸ್ಪೂರ್ತಿಯ ನಿರುಣಿಸಿದೆ ನನ್ನ ಕವನಗಳ ಸಾಲುಗಳಿಗೆ

ಉಸಿರಾದೆ ಭಾವನೆಗಳಿಗೆ ಪದಗಳಾದೆ ಸುಖ ದುಃಖಗಳ ಕವನಗಳಲಿ.ಮರೆತೆಯಾ ಚೆಲುವೆ ಪದಗಳ ಹೆಕ್ಕಿ ನಿನ್ನ ವರ್ಣಿಸಿದ್ದು,

ನಿನ್ನ ಮೆಚ್ಹಿಸಲು ನಾ ಪದಗಳ ಪೋಣಿಸಿದ್ದು ?

ಈಗೇಕೆ ಈ ಮೌನ ಆತಂಕ ನನ್ನ್ದೊಡನೆ...... ?

ಭಾವನೆಗಳ ಬಚ್ಚಿಟ್ಟು ನೋಡುತಿರುವೆಕೆ...?.

ಕಾದಿರುವೆನು ನಿನ್ನ ಹಸಿರು ನಿಶಾನೆಗಾಗಿ

ಪ್ರೀತಿ ಕನಸ ಹೊತ್ತು ಪ್ರೇಮಕಾವ್ಯ ರಚಿಸಲೊಂದು.
Chandseu.

Saturday, May 29, 2010


ನಾನಿಲ್ಲವೇ?

ಸುಹಾಸನೆಯಿದ್ದು ಮುದುಡಿದ ಹೂವಾಗಿರುವೆಕೆ ?

ಸೆಳೆತವಿದ್ದರೂ ನಿಂತ ನೀರಾಗಿರುವೆಕೆ?
ತಂಗಾಳಿಯಿದ್ದರೂ ಉಸಿರುಗಡುತಿರುವೇಕೆ?
ನಿನ್ನ ನೋವ ನಾ ಬಲ್ಲನೇ,
ಕಣ್ಣ ಬಿಟ್ಟು ನೋಡು ನೊಂದ ಮನಗಳೆಷ್ಟು ಈ ಮನಗಳೆಷ್ಟು ಈ ಜಗದಲಿ,
ದ್ರುತಿಗೆಡಬೇಡ ನಾ ಇರುವೆ ನಿನ್ನ ಆತ್ಮ ಸ್ಥ್ಯರ್ಯವಾಗಿ.

Thursday, March 25, 2010

ಬೇವು ಬೆಲ್ಲ ಬೆರೆತಾಗ...


ಬೇವು ಬೆಲ್ಲ ಬೆರೆತಾಗ


ಹೊಸ ಕನಸುಗಳ ಕಟ್ಟಲು

ಸಿಹಿ ನೆನಪುಗಳನು ಮೆಲುಕಿಸಲು

ಕಹಿ ಘಟನೆಗಳ ಅನುಭವಗಳನ್ನು ಮರೆಯಲು

ಮತ್ತೆ ಬಂದಿದೆ ವಸಂತ ಋತು ಹಸಿರುಟ್ಟು ವಯ್ಯಾರದಲಿ

ಕೂಗುತಿಹುದು ಕೋಗಿಲೆ ಹಾಸ ರಾಗದಲಿ ಹೊಸ ನಿರೀಕ್ಷೆಯಲಿ

ಸಿಹಿ ತುಂಬಿರಲಿ ನಿಮ್ಮ ಬಾಳಲಿ,

ಒಂದಾಗಲಿ ಬೇವು ಬೆಲ್ಲ ನಿಮ್ಮ ಬದುಕು ಪರಿಪಕ್ವವಾಗಲು.
"ಯುಗದ ಆದಿ ಎಂದೆಂದು ನಿಮಗೆ ಮತ್ತು ನಿಮ್ಮ ಕುಟುಂಬದವರಿಗೆ ಸುಖ ಸಂತೋಷ ಸಮ್ರುದ್ದಿ ತರಲೆಂದು ಆಶಿಸುವ"..

- ಚಂದಾಮಾಮ -

ಕಣ್ಣಂಚಿನಲಿ ಕಾದಾಗ ...

ನೀ ಹೀಗೇಕೆ ?

ಸಾಗರದೆಡೆಗೆ ಮುಖ ಮಾಡಿ ನೋಡು,
ನಾ ಅಲೆಯಾಗಿ ಬಂದಿಹೆನು ನಿನ್ನ ನೋಡಲು
ತಂಗಾಳಿಯಾಗಿಹೇನು ನಿನ್ನ ಮೈ ಸೋಕಲು
ಮೀಟು ನಿನ್ನ ಹೃದಯದ ತಂತಿಯ
ರಾಗಸ್ವರವಾಗಿಹೇನು ನಾ ಆ ಮಧುರ ಭಾವನೆಗಳಿಗೆ


ಕೇಳು ಎನೆನ್ನುತಿಹುದು ನಿನ್ನ ಮನದಂಗಳದ ಮಾತು
ಈ ಪೌರ್ಣಿಮೆಯ ಚಂದಿರನ ನೋಡು
ಇನ್ನೆಷ್ಟು ದಿನ ನಿನ್ನ ಮುಗುಳ್ನಗೆಯ ಮೌನ
ಕಣ್ಣಂಚಿನ ಆ ಬೆಳಕ ನೋಟ


ಸಾಗರದಿಂದ ಹೊರಬಂದ ಮೀನಿನಂತೆ
ತೀರದಲಿ ಹೊರಳಾಡಿಹದು ಈ ಹೃದಯ
ಕಾದಿರುವೆ ನಿನ್ನ ಪ್ರೀತಿಯ ಸಮುದ್ರಕೆ ಸೇರಿಕೊಳ್ಳಲು
ಹೇಳು ನೀ ಈಗ ನನಗೆ ಸಮುದ್ರವೋ ಅಥವಾ ಸಮುದ್ರ ತೀರದ ಮರಳೋ?

-ಚಂದ್ರು -

Monday, February 8, 2010

ಹುಣ್ಣಿಮೆ ಚಂದಿರನೊಂದಿಗೆ ಒಂದು ರಾತ್ರಿಹುಣ್ಣಿಮೆ ಚಂದಿರನೊಂದಿಗೆ ಒಂದು ರಾತ್ರಿ

ತುಂಬಿದ ಚಂದ್ರನ ನೋಡಿದೆಯಾ ಚೆಲುವೆ ಇಂದು

ಹೊಳೆಯುತಿಹನು ನಿನ್ನ ಕಣ್ಣುಗಳಂತೆ,

ನಸು ನಗುತಿಹನು ನೀ ನನ್ನ ಮುಂದೆ ನಕ್ಕಂತೆ,

ನಾ ಹೇಗೆ ಬಣ್ಣಿಸಲಿ ಅವನನ್ನು ನೀ ಕಾಣುತಿರುವೆ ಅಲ್ಲಿ.
ಕೇಳ ಹೊರಟೆ ಅವನ ಹತ್ತಿರ ನಿನಗೆನನಿಸಿದೆ ಎಂದು

ಅದಕೆ ಅವನಂದ ತುಂಟು ನಗೆಯಲಿ,

ನಿಲ್ಲು ಸ್ವಲ್ಪ ನನ್ನ ಪ್ರಿಯತಮೆ ತಾರೆಗಳನು ಬೆಳಗಿ ಬರುವೆನು

ನಲಿಯಲಿ ಅವು ಉಲ್ಲಾಸದಲಿ ನನ್ನ ಈ ಸುಂದರ ಬೆಳಕಿನಲಿ.
ಬಿಸಿಲಲಿ ಬಳಲಿದವರಿಗೆ ತಂಗಾಳಿ ಜೊತೆ ಮಿಲನವಾಗಿರುವೆ ವಿಹರಿಸಲು

ಸಂತೈಸುವೆ ನೊಂದ ಮನಗಳಿಗೆ ತುಸು ಹೊತ್ತು ನೋವ ಮರೆಯಲು

ತಾಯಂದಿರ ಕೈ ತುತ್ತಾಗಿರುವೆ ಅಳುವ ಕಂದಮ್ಮಗಳಿಗೆ ಉಣಬಡಿಸಲು,

ಸ್ಪೂರ್ತಿಯಾಗಿರುವೆ ಪ್ರೇಮಿಗಳಿಗೆ ಹೃದಯ ಕದಿಯಲು

ಕನಸಾಗಿಹೆನು ಬೆಳದಿಂಗಳ ಊಟಕೆ ಹಾತೊರೆಯುತಿರುವೆ ಎಷ್ಟೋ ಪ್ರೇಮ ಪಕ್ಷಿಗಳಿಗೆ

ಇಂತಿಪ್ಪ ಚಂದಮಾಮ ತನ್ನ ವರ್ಣಿಸಿಕೊಳುತಿರಲು

ಮಾಯವಾದವು ತಾರೆಗಳು, ಮಂಜಿನ ಹನಿ ಗರಿಕೆಗೆ ಮುತ್ತಿಟ್ತಿರಲು

ಶುರುವಾಗಿತ್ತು ಹಕ್ಕಿ-ಪಕ್ಷಿಗಳ ನಾದ

ಅತ್ತ ಕೇಳಿಸಿತೊಂದು ಧ್ವನಿ " ಎಲವೋ ಚಂದಿರನೆ ನಿಲ್ಲಿಸು ನಿನ್ನ

ವರ್ಣಿಸು ಈಗ ನನ್ನ" ಎಂದಿತು ಮೂಡಣದಲಿ

ಉದಯಿಸುತಿತ್ತ ರವಿಮಾಮನ ರೂಪದಲಿ.

-ಚಂದ್ರು-

Monday, January 18, 2010

ಹೊಸ ನಿರೀಕ್ಷೆಯಲಿ...

ಬೆಳಕು

ಹುಣ್ಣಿಮೆ ಚಂದಿರ ಕಾದಿರುವ ನಿನ್ನ ಅಂದ ಕದ್ದು ನೋಡಲು

ಬಚ್ಹಿಕೋ ಅವನ ಬೆಳಕ ಬಿಟ್ಟು ನನ್ನ ಕನಸ ಗೂಡಲಿ

ಜಾರದಿರಲಿ ಸಿಹಿ ಕನಸುಗಳು ಜಲಪಾತಗಳಲಿ

ಕರಗದಿರಲಿ ಮಲೆನಾಡ ರಮ್ಯ ನೋಟಕ

ಮಲಗೆನ್ನ ಮುದ್ದು ರಾಣಿ

ಹೊತ್ತಾರೆ ಚಳಿಯ ಮಂಜಿನಲಿ ನಿನ್ನ ಕಣ್ಣ ಮುಂದೆ ಬರುವೆ ಬೆಳಕಾಗಿ.