Thursday, May 24, 2012

ಏನೆಂದು ಕರೆಯಲಿ?

ಏನೆಂದು ಕರೆಯಲಿ ಚಂದುಳ್ಳಿ ಚೆಲುವೆ
ನಾ ನಿನ್ನ ಏನೆಂದು ಕರೆಯಲಿ ನಿನ್ನ ಹೆಸರನ್ನು
ಬೇಲೂರು
ಐಹೊಳೆಯ ಕಣ್ಮನ ಸೆಳೆಯುವ ಶಿಲ್ಪಕಲೆಯೇನ್ನಲೇ ?
ಬೇರು ಕಾಣದ ಹಾಗೆ ತಾ ಮುಂದು ನಾ ಮುಂದು ಹಬ್ಬಿರುವ ಮಲ್ಲಿಗೆಯ ಹೂಲತೆಯನ್ನಲೇ?
ಕಂಗೆಟ್ಟ ಮನಕೆ ಹಿತ ನೀಡುವ ಹೃದಯ ಗೀತೆಯನ್ನಲೇ?
ಮುಸಂಜೆಯ ತಂಗಾಳಿಗೆ  ಕಂಪಿಸುತಿರುವ ಸಂಪಿಗೆಯ ಸುಮಲತೆಯೇನ್ನಲೇ?
 ಹೇಳೆನ್ನ ಮುದ್ದು ಚೆಲುವೆ ನಾ ಏನೆಂದು ಕರೆಯಲಿ?