Thursday, September 29, 2011

ಕಂಬಾರರ ಕನ್ನಡಕೊಂದು..............


ಕಂಬಾರರ ಕನ್ನಡಕೊಂದು...


ಬನ್ನಿ ಕನ್ನಡಿಗರೇ ಇಂದು ಮತ್ತೊಂದು ಗರಿ ನಮ್ಮಿಹಿರಿಮೆಗೆ
ಅರಿಯಬನ್ನಿ ಕನ್ನಡದ ತಿರುಳು ಎಷ್ಟು ಮಹತ್ವವೆಂದು,
ಮಾತಾಡಿ ಕನ್ನಡದಲಿ ತಿಳಿಯುವುದಿಲ್ಲಿ ಭಾಷೆ ಸೊಗಸು,
ಕೂಗಿ ಹೇಳಿ ನಾ ಕನ್ನಡಿಗನೆಂದು ಹೆಮ್ಮೆಯಲಿ

ನಿತ್ಯ ಹಾಡಿ ಕನ್ನಡ ಕವಿ ಕುವರರ ಮಾನವತೆಯ ಸಂದೇಶಗಳನು
ಕಣ್ಣ ಹರಿಬಿಡಿ ಒಮ್ಮೆ ಕನ್ನಡ ಸಾಹಿತ್ಯದ ವನ ಕುಸುಮಗಳಲಿ,
ಅಷ್ಟ ದಿಗ್ಗಜರ ಸಾಧನೆಗಳ ಆ ಕೈಪಿಡಿಗಳಲಿ
ನೆನಪಿರಲಿ ಈ ಎಂಟರ ಗಂಟು ನಮ್ಮ ಕನ್ನಡಿಗರಿಗೆ ಮಾತ್ರ,
ಬಾರಿಸುತಲಿದೆ ಕುವೆಂಪು ಹೇಳಿದ ಆ ಕನ್ನಡ ಡಿಂಡಿಮವ.
--------------Chandru------------------

Wednesday, September 7, 2011

ವೊರ್ಕ v/s ವೋಡ್ಕಾ

ವೊರ್ಕ v/s ವೋಡ್ಕಾ

ಹೊರ ವರ್ತುಲ ರಸ್ತೆಗಳಿಗೆ ಒರ್ಕಾ,
ಎಂಪ್ಲಾಯೆಗಳು ಹೇಳುವರು ಕಂಪನಿಗೆ ಏನಾದ್ರು ಮಾಡ್ಕಾ
ಗಡಿಬಿಡಿಲಿ 5 ಗಂಟೆಗೆ ಓಡೋಕ,
ಆಫೀಸಲ್ಲಿ ಉಳಿದವರೆಲ್ಲೇ ಆಗಿರುವರು ಬಕ್ರ,

ಟೀಮ್ ಲೀಡ್ಗಳು ಆಫೀಸ್ ಕಾಲಿ ಕಾಲಿ ನೋಡಾಕ,
ಮ್ಯಾನೆಜರಗಳೆಲ್ಲ ಬಾಯಿ ಬಾಯಿ ಬಡ್ಕೊಳಕಾ,
ಅತ್ತ ಆನ್ ಸೈಟ ಜನ ನಮ್ಮ ಜನನ್ನ ಬೈದ್ಕೊಳಕಾ
ಹೆಚ್ ಆರ್ ಹಾಜರಿಗೆ ತಲೆ ಕೆರ್ಕೊಳಕಾ,
ಹಳೆ ಟ್ರಾವೆಲ್ ಏಜೆಂಟ್ ಶಾಪ ಹಾಕೋಕ,
ಇತ್ತ ಎಂಪ್ಲಾಯೆಗಳು ಮನೆಗೆ ಹೋಗಿ ಲೈಟಾಗಿ ತಗೋತ ಇದ್ರೂ ವೋಡ್ಕಾ!!

-Chandseu-