Sunday, April 7, 2013

ಕವಿತೆ ನೀ ಎಲ್ಲಿದ್ದೆ!!

ಕೆಲವು ತಿಂಗಳಿಂದ ಯಾವುದೇ ಕವಿತೆಗಳನ್ನು ಮದುವೆ, ಹೊಸ ಸಂಸಾರ, ನೆಂಟರು, ಕೆಲಸದ ಒತ್ತಡ, ಅಮ್ಮನ ನೆನಪು, ಈ ಎಲ್ಲದರ ನಡುವೆ ಬರೆಯಲು ಆಗಲಿಲ್ಲ . ಹಾಗೆ "ಕವಿತೆ " ಈಗ ನನ್ನ ಪ್ರಶ್ನೆ ಎಲ್ಲಿದ್ದೆ ಇಷ್ಟು ದಿವಸ ಎಂದು!!

ಕವಿತೆ ನೀ ಎಲ್ಲಿದ್ದೆ!! 



ಚಳಿಗಾಲದ ಮಂಜಿನಲಿ ಮಲಗಿದ್ದೆಯಾ ಒದ್ದೆ ಮನಸಿನಲಿ!!,,



ಮಲೆನಾಡಿನ ಮಳೆಯ ತುಂತುರು ಹನಿಯಲ್ಲಿದ್ದೆಯಾ?



ಸೂರ್ಯಕಾಂತಿ ಹೂವಿನ ರಸದಲಿ ಚಿಟ್ಟೆಗೆ ಆಹಾರವಾಗಿದ್ದೆಯಾ ?



ವಸಂತ ಋತುವಿನ ಚಿಗುರೆಲೆಯಲಿಯಿದ್ದೆಯಾ?



ಬತ್ತದ ಹಾಲು ತೆನೆಯಾಗಿದ್ದೆಯಾ ಬಲು ಪೈರು ಕೊಡಲು?





ಮುಸಂಜೆಯ ಮೊಡಗಳಾಗಿದ್ದೆಯ ಮುಂಗಾರು ಮಳೆ ಹೊಯ್ಯಲು ?


ಚಂದಿರ ಜೊತೆ ಆಟವಾಡುತಿ ದ್ದೆಯಾ ಮಗುವಿನಂತೆ?

ಸೂರ್ಯೋದಯದ ಕೆಂಪು ವರ್ಣದಲ್ಲಿ ಅಡಗಿದ್ದೆಯಾ ಪ್ರುಥ್ವಿಯನ್ನು ಅಲಂಕರಿಸಲು!

ಕೊಲುಮಿಂಚಾಗಿದ್ದೆಯಾ ಭಯಹುಟ್ಟಿಸಲು ಮುದ್ದು ಕಂದಮ್ಮಗಳಿಗೆ?

ತಾರೆ ಬೆಳಕಾಗಿರುವೆ ಗಗನ ಬೆಳಗಲು ಚಂದಿರನ ಜೊತೆಗೆ?



ಹಸುಗೂಸುವಿನ ನಗುವಿನಲ್ಲಿದ್ದೆಯಾ ?

ತಾಯಿ ತಂದೆಯರ ಪ್ರೀತಿ-ವಾಸ್ತಲ್ಯದಲ್ಲಿದ್ದೆಯಾ ?

ಅನಾಥ ಮಕ್ಕಳ ಕಂಬನಿಯಾಗಿದ್ದೆಯಾ ?

ವೃದ್ದ ದಂಪತಿಗಳ ಮೌನದಾಳದ ಮಾತಾಗಿದ್ದೆಯಾ ?

ಈ ಚಂದಿರನ ಅಂಗಳದಲ್ಲೇಕೆ ನಿನ್ನ "ಮೌನ" ಇಷ್ಟು ದಿನ?

-chandseu-

Wednesday, January 30, 2013

ದಿಬ್ಬಣ










 ದಿಬ್ಬಣ ಹೊರಟೈತೆ ನೋಡಾ ತಾರೆಗಳೇ  ಚಂದಿರನ ದಿಬ್ಬಣ ಹೊರಟೈತೆ,
ಬನ್ನಿರೈ ಹರಸಿ ಹೊಸ   ಬಾಳ ಬಂಡಿಯ ನೊಗವನು ಹೊರಳಿರುವ ನವ ದಂಪತಿಗಳಿಗೆ,
ಭಾನುವೇ ಬಣ್ಣಿಸೈ ನಮ್ಮ ಮರೆಯಲಾಗದ ದಿನವ ನಿನ್ನ ಹೊಂಗಿರಣಗಳ ಮೂಲಕ,

ಹರಸೈ  ನಮ್ಮನು ನಿನ್ನ ಕಿರಣಗಳಿಂದ ಬೆಳಗಲಿ ಬಾಳೆಂದೂ ಸದಾ ,

ಬನ್ನಿರೈ ನೀವೆಲ್ಲರೂ ಶುಭಾವಿವಾಹಕೆ ಹರಸಲು ನಮ್ಮನು.