Tuesday, October 27, 2009

ಚಂದ್ರಾಯಣ-೪


ನೆರೆ-ನೆರವು



ನಲುಗೆದ್ದೆವು ಬರಗಾಲದ ಬವಣೆಯಲ್ಲಿ,

ಬೆಂದಿದ್ದೆವು ರಣಬಿಸಿಲಿನ ಬೀಗೆಯಲಿ,

ಹವಣಿಸುತ್ತಿತ್ತು ಜೀವ ತೊಟ್ಟು ಹನಿಗಾಗಿ,
ಬಾಯ್ತೆರೆದು ನಿಂತಿದ್ದಳು ಭೂತಾಯಿ ವರುಣನಿಗಾಗಿ.



ಅದೇನು ಶಾಪವೋ ಅಥವಾ ಹಣೆಬರವೋ,
ಬಂದಿದ್ದ ವರುಣ ಮೃತ್ಯುಕೋಪವಾಗಿ,
ತುಂಗೆಭದ್ರೆ ಕೃಷ್ಣೆಯಾದಿಯಾಗಿ,
ನಡೆದಿತ್ತು ವರುಣನ ರುದ್ರನರ್ತನ,
ಅದಕಲ್ಲಿ ಉತ್ತರ ಮೌನ!.


ನಲುಗಿರಲು ಧರೆ ಜಲಧಾರೆಯಲಿ,
ಬೇಡಿತ್ತು ಎಲ್ಲಿರ ಹೃದಯ ಬಡಿತ,
ಗುಡಿ ಗಂಟೆಯ ಬದಲಾಗಿ,
ಜೀವ ಸಂಕುಲ ರಕ್ಷಣೆಗಾಗಿ,
ಆವರಿಸಿತ್ತು ನಿರಾಳ ಮೌನ,
ಬದುಕಾಯಿತು ಮೂರಾಬಟ್ಟೆ.


ಕೊಚ್ಹಿ ಹೋದವು ಮನೆ ಮಠಗಳೆಲ್ಲ ಗಂಗೆಯಲಿ,
ಮೊಳೆಕೆಹೊಡೆದವು ಬೆವರು ಹರಿಸಿ ಕೂಡಿಟ್ಟಿದ್ದ ದವಸ ಧಾನ್ಯಗಳೆಲ್ಲ,
ಮೌನವಾದಳು ಅದೇ ಪಕೃತಿ ಮಾತೆ, ಹಕ್ಕಿ ಪಕ್ಷಗಳ ನಾದಸ್ವರವಿಲ್ಲದೆ,

ರಕ್ಕಸತಂಗಡಿಯಾಯಿತು ಮತ್ತೊಮ್ಮೆ ಈ ಭೂಮಿ.

ಎತ್ತನೋಡಿದರೆಲ್ಲಿ ಸ್ಮಶಾನ ಮೌನ,
ಹುದುಕದಂತಾದವು ಮಾಗುತಿಹ ಮನಗಳು,
ಸಿಗದ ಉತ್ತರವ, ಪ್ರಶ್ನೆಗಳ ಸರಮಾಲೆಯ, ಕಾಣದ ದಾರಿಯ.....


ಹರಿಯುತಲಿದೆ ಮಾನವತೆಯ ನೆರವು ಎಲ್ಲೆಡೆಯಿಂದ ಉತ್ತರಡೆಗೆ,
ಹಸಿದ ಹೊಟ್ಟೆಗೆ ತುತ್ತಿಕಲು, ನೊಂದ ಜೀವ ಸಂತೈಸಲು,
ನಾಳಿನ ಬದುಕಿಗೆ ಭರವಸೆ ತುಂಬಲು.

ಬಾಳಬಂಡಿಯ ನೊಗ ಇನ್ದೆಂದೂ ಕಳಚದಿರಲಿ,
ಸಾಗಲಿ ಈ ಬದುಕ ಪಯಣ ಹೊಸ ಕನಸುಗಳ ಹೊತ್ತು,
ಬೆಳಗಲಿ ಮುಂದಿನ ಬಾಳು ದೀವಳಿಗೆಯ ದೀಪದಂತೆ,
ಬನ್ನಿ ಆ ದೀಪಗಳ ಹಚ್ಚಲು ಎಲ್ಲರೂ ಕೈ ಜೋಡಿಸೋಣ,
ಮಾನವತೆಯ ಬಾವುಟ ಹಾರಿಸುವ....

--chandseu--



2 comments:

  1. ಚಂದ್ರು,
    ಬಾಲು ನಿಮ್ಮ ಬ್ಲಾಗನ್ನು ನನಗೆ ಪರಿಚಯಿಸಿದರು. ನೋಡಿದೆ, ಚೆನ್ನಾಗಿದೆ. ಮುಂದುವರಿಸಿ.

    ReplyDelete