Thursday, September 29, 2011

ಕಂಬಾರರ ಕನ್ನಡಕೊಂದು..............


ಕಂಬಾರರ ಕನ್ನಡಕೊಂದು...


ಬನ್ನಿ ಕನ್ನಡಿಗರೇ ಇಂದು ಮತ್ತೊಂದು ಗರಿ ನಮ್ಮಿಹಿರಿಮೆಗೆ
ಅರಿಯಬನ್ನಿ ಕನ್ನಡದ ತಿರುಳು ಎಷ್ಟು ಮಹತ್ವವೆಂದು,
ಮಾತಾಡಿ ಕನ್ನಡದಲಿ ತಿಳಿಯುವುದಿಲ್ಲಿ ಭಾಷೆ ಸೊಗಸು,
ಕೂಗಿ ಹೇಳಿ ನಾ ಕನ್ನಡಿಗನೆಂದು ಹೆಮ್ಮೆಯಲಿ

ನಿತ್ಯ ಹಾಡಿ ಕನ್ನಡ ಕವಿ ಕುವರರ ಮಾನವತೆಯ ಸಂದೇಶಗಳನು
ಕಣ್ಣ ಹರಿಬಿಡಿ ಒಮ್ಮೆ ಕನ್ನಡ ಸಾಹಿತ್ಯದ ವನ ಕುಸುಮಗಳಲಿ,
ಅಷ್ಟ ದಿಗ್ಗಜರ ಸಾಧನೆಗಳ ಆ ಕೈಪಿಡಿಗಳಲಿ
ನೆನಪಿರಲಿ ಈ ಎಂಟರ ಗಂಟು ನಮ್ಮ ಕನ್ನಡಿಗರಿಗೆ ಮಾತ್ರ,
ಬಾರಿಸುತಲಿದೆ ಕುವೆಂಪು ಹೇಳಿದ ಆ ಕನ್ನಡ ಡಿಂಡಿಮವ.
--------------Chandru------------------

1 comment: